


ದ್ವಿತೀಯ ಪಿಯುಸಿ 2025 ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಭಟ್ಕಳ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಸಿದ್ದಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು, ಶಿರಾಲಿ ಶೇಕಡಾ 100 ಫಲಿತಾಂಶ ಹಾಗೂ ಸಿದ್ದಾರ್ಥ ಪದವಿಪೂರ್ವ ಕಾಲೇಜು, ಭಟ್ಕಳ ಶೇಕಡಾ 99 ಫಲಿತಾಂಶ ದಾಖಲಿಸಿ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.
ಸಿದ್ದಾರ್ಥ ಪದವಿಪೂರ್ವ ಕಾಲೇಜು, ಭಟ್ಕಳದಲ್ಲಿ 115 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 160 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರಿ ಸಂಜನಾ ಮಂಜುನಾಥ ನಾಯ್ಕ 600ಕ್ಕೆ 589 (98.17%) ಅಂಕ ಪಡೆದು ಪ್ರಥಮ ಸ್ಥಾನ, ಕುಮಾರ್ ಸಚೀನ್ ಹೆಚ್. ಆರ್. 600 * 588 (98.00%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಕುಮಾರ್ ಮೆಥೇವ್ ಜೊನ್ ಲೂಯಿಸ್ 600 ಕ್ಕೆ 585 (97.50%) ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸಿದ್ಧಾರ್ಥ ಸಂಯುಕ್ತ ಪದವಿಪೂರ್ವ ಕಾಲೇಜು, ಶಿರಾಲಿಯ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ ಒಟ್ಟೂ 47 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ, 22 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 25 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಕುಮಾರ್ ನವನೀತ್ ನಾಯ್ಕ 600ಕ್ಕೆ 569 (94.83%) ಅಂಕ ಪಡೆದು ಪ್ರಥಮ ಸ್ಥಾನ, ಕುಮಾರ್ ಗಣಪತಿ ನಾಯ್ಕ 600 ಕ್ಕೆ 562 (93.66%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಕುಮಾರ್ ವಿಜಯೇಂದ್ರ ಎಮ್ ನಾಯ್ಕ 600 ಕ್ಕೆ 554 (92.33%) ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 1 ವಿದ್ಯಾರ್ಥಿ 100ಕ್ಕೆ 100, ರಸಾಯನಶಾಸ್ತ್ರದಲ್ಲಿ 01 ವಿದ್ಯಾರ್ಥಿ 100 ಕ್ಕೆ 100, ಗಣಿತ ವಿಷಯದಲ್ಲಿ 08 ವಿದ್ಯಾರ್ಥಿಗಳು 100 ಕ್ಕೆ 100, ಗಣಕಯಂತ್ರ ವಿಜ್ಞಾನ ವಿಷಯದಲ್ಲಿ 05 ವಿದ್ಯಾರ್ಥಿಗಳು 100 ಕ್ಕೆ 100, ಜೀವಶಾಸ್ತ್ರ ವಿಷಯದಲ್ಲಿ 03 ವಿದ್ಯಾರ್ಥಿಗಳು 100 ಕ್ಕೆ 100, ಕನ್ನಡ ವಿಷಯದಲ್ಲಿ 02 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದು ಸಾಧನೆ ಗೈದಿದ್ದಾರೆ.
ಸಿದ್ದಾರ್ಥ ಪದವಿಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕುಮಾರ್ ಸಂಜಯ್ 600 ಕ್ಕೆ 545 ಅಂಕ (90.83%) ಪಡೆದು ಪ್ರಥಮ ಸ್ಥಾನ, ಕುಮಾರ್ ಶಯನ್ ಮೋಹನ್ ಮೊಗೇರ್ 600 ಕ್ಕೆ 541 ಅಂಕ (90.17%) ಪಡೆದು ದ್ವಿತೀಯ ಸ್ಥಾನ ಹಾಗೂ ಕುಮಾರಿ ಕಾಂಚನ ಈಶ್ವರ್ ನಾಯ್ಕ 600 ಕ್ಕೆ 536 ಅಂಕ (89.33%) ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವರ್ಗದವರು ಅಭಿನಂದಿಸಿದ್ದರು.